ಕೆಟ್ಟ ಮಗನಿಗೆ ತಾಯಿಯಾಗಲು ಇಷ್ಟವಿಲ್ಲ - ಶೃತಿ
Posted date: 28 Tue, Apr 2015 – 11:12:07 AM

ನಟಿ ಶೃತಿಗೆ ಏಳನೆ ತರಗತಿ ಓದುತ್ತಿರುವ ಮಗಳು ಇದ್ದಾರೆ. ಆದರೆ ಕೆಟ್ಟಮಗನಿಗೆ ತಾಯಿಯಾಗಲು ಇಷ್ಟ ಅಲ್ಲ ಎಂಬ ಅವರ ಮಾತುಗಳು ಗೊಂದಲ ತರಬಹುದು. ಯಸ್ ಅವರು ಹೇಳಿರುವುದು ರೀಲ್‌ನಲ್ಲಿ ಇತ್ತೀಚೆಗೆ ಅವರಿಗೆ ಹುಡುಕಿಕೊಂಡು ಬರುವ ಪಾತ್ರಗಳು. ಸುಮಾರು ಹದಿನೆಂಟು ಇಂತಹುದೆ ಪಾತ್ರಗಳನ್ನು  ತಿರಸ್ಕರಿಸಿದ್ದಾರೆ. ಕೆಲವೊಮ್ಮೆ ಆಹಾರಕ್ಕೆ, ಹಾರಕ್ಕೆ ಪಾತ್ರ ಮಾಢಬೇಕಾದ ಪರಿಸ್ಥತಿ ಬರುತ್ತದೆ. ೧೯೪೪ ಚಿತ್ರದಲ್ಲಿ ಹಾರಕ್ಕಾಗಿ ಮಾಡುತ್ತಿದ್ದೇನೆ.  ಸ್ವಾತಂತ್ರಕ್ಕಾಗಿ ಹೋರಾಟ ಮಾಢಲಿಲ್ಲ. ಇಂತಹ ಪಾತ್ರಗಳಲ್ಲಿ ಅಭಿನಯಿಸಿ ದೇಶಪ್ರೇಮದ ಋಣ ತೀರಿಸುವ ಅವಕಾಶ ಸಿಕ್ಕಿದೆ ಅಂತ ಹೇಳುತ್ತಾರೆ. ಬಹುಶ: ಪುಟ್ಟಕ್ಕನ ಹೈವೆ ನಂತರ ಇದೇ ಚಿತ್ರ ನನಗೆ ಇಷ್ಟವಾಗಿದೆ. ಹದಿನೈದು ವರ್ಷ ಇರುವಾಗಲೆ ಮೂರು ಮಕ್ಕಳ ತಾಯಿಯಾಗಿ ನಟಿಸಿದ್ದೇನೆ. ಈಗ ತಾಯಿ ಪಾತ್ರ ಮಾಡಲು ಕಷ್ಟವೇನಿಲ್ಲ. ಆದರೆ ನಿರ್ದೇಶಕರು ಬಂದು ಕತೆ ಹೇಳುವಾಗ ನಾಯಕ ರೌಡಿ,ಪರೋಡಿ ಅಂತ ಬಿಂಬಿಸಿ ಅವರಿಗೆ ತಾಯಿ ಪಾತ್ರ ಮಾಡಬೇಕು ಅಂತ ಹೇಳುವಾಗ ಬೇಸರತರುತ್ತದೆ. ನೂರೈವತ್ತು ಚಿತ್ರಗಳಲ್ಲಿ ನಟಿಸಿದರೂ ಗೌರವಾನ್ವಿತ ಪಾತ್ರಗಳಲ್ಲಿ ನಟಿಸಬೇಕೆಂಬ ಬಯಕೆ ಇದೆಯಂತೆ. ತೆಲುಗು,ತಮಿಳಿನಲ್ಲಿ ಪೋಷಕ ಪಾತ್ರಗಳಿಗಂತಲೆ ಕತೆ ಸೃಷ್ಟಿಸುತ್ತಾರೆ. ನಮ್ಮಲ್ಲಿ  ಪುರಷರಿಗೆ ಮಾತ್ರ ಇದೆ. ಹೊಸ ತಂತ್ರಜ್ಗರ ಚಿತ್ರದಲ್ಲಿ ನಟಿಸಲು ಆಸೆ. ಅವರಲ್ಲಿ ಏನಾದರೂ ಮಾಢಬೇಕಂಬ ತುಡಿತ ಇರುತ್ತದೆ. ಗೊಂಬೆಗಳ ಲವ್ ತಂಡವು ಇದಕ್ಕೆ ಉದಾಹರಣೆ.
ನಿರ್ಮಾಪಕಿಯಾಗಿ ಗಟ್ಟಿಮೇಳ ಚಿತ್ರವು ಅನುಭವ ತಂದುಕೊಟ್ಟಿದೆ. ಅಳುಮುಂಜಿ ಪಾತ್ರಗಳನ್ನು ಮಾಡಿ ಬೇಸತ್ತಿದ್ದ ನನಗೆ ಮುಗ್ದ ಹುಡುಗಿಯಾಗಿ ಹಾಸ್ಯ ಪಾತ್ರ, ಅಲ್ಲದೆ ನವಿಲೇನು ಕುಣಿಬೇಕು ಹಾಡು  ಈಗಲೂ ಕೇಳುವಂತಿದೆ. ಹಾಸ್ಯ ಪಾತ್ರಗಳು ಮಾಡಿದರೆ ಎಲ್ಲರು ನಗುವಂತಿರಬೇಕು. ಹಾಸ್ಯಸ್ಪದ ಪಾತ್ರ ಇಷ್ಟ ಆಗುವುದಿಲ್ಲ. ಇತ್ತೀಚಿನ ನಾಯಕಿಯರಿಗೆ ಪಾತ್ರ, ಬಟ್ಟೆ ಕಡಿಮೆಯಾಗಿದೆ ಅಂತ ಖೇದ ವ್ಯಕ್ತಪಡಿಸಿ ನಮ್ಮ ಕಾಲದಲ್ಲಿ ಈ ರೀತಿ ಇರಲಿಲ್ಲ. ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷ ಸೇವೆ ಸಲ್ಲಿಸಿದ್ದು ಆಯಿತು.  ಎಲ್ಲಾ ಕಷ್ಟಗಳನ್ನು ಎದುರಿಸಿ ನೆಮ್ಮದಿಯಿಂದ ಇದ್ದೇನೆ. ಮಾಗಡಿ ಹತ್ತಿರ ಭೂಮಿ ಇದೆ. ಅಲ್ಲಿ ಎನ್‌ಜಿಓ ಪ್ರಾರಂಭಿಸಿ ಸಮಾಜಸೇವೆ ಮಾಢಬೇಕಂಬ ವಾಂಚೆ.  ಇತ್ತೀಚಿನ ಚಿತ್ರಗಳು ಗೆಲುವು ಕಾಣುತ್ತಿರುವುದು  ಹೊಸಬರಿಗೆ ಹುರುಪು ತಂದಿದೆ ಎನ್ನುತ್ತಾರೆ ಶೃತಿ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed